ಕಳೆದ ಕೆಲ ವರ್ಷಗಳಿಂದ ರೂಪಿಸಿದ ಒಳಚರಂಡಿ ವ್ಯವಸ್ಥೆ ರಿಪೇರಿಗೆ ಬಂದಂತಿದೆ. ನನ್ನ ಮನೆಯ ಮುಂದಿನ ಪಿಟ್ ಭರ್ತಿ ಆಗಿದೆ. ನನ್ನ ಮನೆ ಕಂಪೌಂಡ್‌ನ ಷೇಂಬರ್‌ನಿಂದ ಟಾಯ್ಲೆಟ್ ತ್ಯಾಜ್ಯ ನೀರು ಹೊರ ಚೆಲ್ಲುತ್ತಿದೆ. ಕೇವಲ ಹದಿನೈದು ದಿನಗಳ ಹಿಂದೆ ಸ್ಥಳೀಯ ಖಾಸಗಿ ಕರ್ಮಚಾರಿಗಳನ್ನು ಕರೆಯಿಸಿ ಸ್ವಚ್ಛಗೊಳಿಸಿದ್ದೆ. ಅವರು ಪಿಟ್ ಖಾಲಿ ಮಾಡಿ ಪೈಪ್‌ಲೈನ್ ಚೆಕ್ ಮಾಡಿದರು. ಪಿಟ್‌ನಿಂದ ಮುಂದೆ ಎಲ್ಲೋ ಪೈಪ್ ಬ್ಲಾಕ್ ಆಗಿದೆ ಎಂದು ಅವರು ಅಂದಾಜಿಸಿದ್ದರು. ಆ ಕ್ಷಣಕ್ಕೆ ಏನೋ ನಿರಾಳವಾಗಿದ್ದೆ. ಈಗ ಮತ್ತೆ ಎರಡು ಮೂರು ದಿನಗಳಿಂದ ಸಮಸ್ಯೆ ಉಲ್ಬಣಿಸಿದೆ. ಇದರಿಂದ ಮನೆ ಮತ್ತು ಸುತ್ತ ಮುತ್ತ ಗಬ್ಬು ವಾಸನೆ ಬರುತ್ತಿದೆ. ಪರಿಸ್ಥಿತಿ ಇನ್ನಷ್ಟು ಹದಗೆಡುವ ಮುನ್ನ ದಯವಿಟ್ಟು ಅದನ್ನು ಸರಿಪಡಿಸಲು ನಿಮ್ಮ ಇಲಾಖೆಯ ವ್ಯಾನ್ ಕಳುಹಿಸಲು ಕೋರುತ್ತೇನೆ.
Was this information helpful? |
in this lane we have drainage block weakly twice please clear the issue ASAP we have all small children in this area.please help us by clearing this problem i hope you can understand and clear this issue soon.