ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬೇಲೂರು ತಾಲ್ಲೂಕು ಬಸ್ ಸ್ಟಾಂಡ್-573115 (ಹಾಸನ ಜಿಲ್ಲೆ) ನಲ್ಲಿ ದಿನಾಂಕ:[protected] ರಂದು ಮಾಸಿಕ ಬಸ್ ಪಾಸ್ ಮಾಡಿಸಲು ಸಂಜೆ 6.30 ಕ್ಕೆ ಸಂಚಾರ ವ್ಯವಸ್ಥಾಪಕರನ್ನು ವಿಚಾರಿಸಿದಾಗ ಬಸ್ ಪಾಸ್ ಮಾಡಲಾಗುವ ಸಮಯ ಬೆಳ್ಳಗ್ಗೆ 9-00 ರಿಂದ ಸಂಜೆ 5-00 ವರೆಗೆ ಎಂದು ತಿಳಿಸಿದರು. ಮಾಸಿಕ ಬಸ್ ಪಾಸ್ ಮಾಡಿಸುತ್ತೀರುವ ನಾನು ಕಛೇರಿಗೆ 7.30 ಕ್ಕೆ ಹೊರಟು ಸಂಜೆ ಸುಮಾರು 06.30 ಗಂಟೆಗೆ ಹಿಂದಿರುಗುತ್ತಿದ್ದು, ನನಗೆ ಮೇಲೆ ತಿಳಿಸಿದ ಸಮಯದಲ್ಲಿ ಮಾಸಿಕ ಬಸ್ ಪಾಸ್ ಮಾಡಿಸಲು ಸಾಧ್ಯವಾಗುತ್ತಿಲ್ಲ. ಅದರ ಬಗ್ಗೆ ಡಿಪೋ ಮ್ಯಾನೇಜರ್ (ಮೊ.ನಂ.[protected])ರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಉಡಫೆಯಾಗಿ ಒಂದು ದಿನ ಕಛೇರಿಗೆ ರಜೆ ಹಾಕಿ ಮಾಸಿಕ ಬಸ್ ಪಾಸ್ ಮಾಡಿಸಿಕೊಳ್ಳಿ ಎಂದು ತಿಳಿಸಿದರು. ಇದರಿಂದ ನನಗೆ ತುಂಬ ಅನಾನುಕೂಲವಾಗುತ್ತಿದ್ದು, ನನಗೆ ಭಾನುವಾರ ಹೊರತು ಪಡಿಸಿ ಯಾವುದೇ ದಿನ ರಜೆ ಇರುವುದಿಲ್ಲ. ಆದ್ದರಿಂದ ಮಾಸಿಕ ಬಸ್ ಪಾಸ್ನ್ನು ಬೆಳ್ಳಗ್ಗೆ 9-00 ರಿಂದ ಸಂಜೆ 5-00 ಘಂಟೆ ಹೊರತುಪಡಿಸಿ ಬೇರೆ ಸಮಯದಲ್ಲಿ ಮಾಡಿಸಲು ಸಾಧ್ಯ ಇಲ್ಲವೇ..???. ಇದರಿಂದ ನನಗೆ ತುಂಬ ತೊಂದರೆ ಆಗಿದ್ದು ಯಾವ ರೀತಿ ಮಾಸಿಕ ಬಸ್ ಪಾಸ್ ಮಾಡಿಸಬೇಕೆಂದು ತಿಳಿಯುತ್ತಿಲ್ಲ. ನಾನು ಕಛೇರಿಗೆ ತೆರಳುವ ಸಮಯದಲ್ಲಿ ಯಾವ ರೀತಿ ಮಾಸಿಕ ಬಸ್ ಪಾಸ್ ಮಾಡಿಸಬೇಕೆಂದು ಮಾಹಿತಿ ನೀಡಬೇಕಾಗಿ ಕೇಳಿಕೊಳ್ಳುತ್ತೇನೆ.
ಶಬರೀಶ ಯು ಜೆ
[protected] Was this information helpful? |
Post your Comment