Address: Bangalore, Karnataka |
ಮಾನ್ಯರೆ,
ವಿಷಯ: ವಾಹನ ನಿಲುಗಡೆ ಮಾಡದಿರುವ ಕುರಿತು
ದಿನಾಂಕ 30.06.2015ರ ಸಂಜೆ ಶಿರಸಿ ಸಿದ್ಧಾಪುರ ಮಾರ್ಗದ ಕಾಳೆನಳ್ಳಿ ಬಸ್ ನಿಲ್ದಾಣಕ್ಕೆಶಿರಸಿ ಘಟಕದ KA42, F392 (ಶಿರಸಿ ಸಾಗರ) ಸಂಖ್ಯೆಯ ಬಸ್ 06.05 ನಿಮಿಷಕ್ಕೆ ಬಂದಿದ್ದು ತಾಳಗುಪ್ಪಾ ರೈಲು ನಿಲ್ದಾಣಕ್ಕೆ ಪ್ರಯಾಣಿಸಬೇಕಾಗಿದ್ದ ನಾನು ಬಸ್ ನಿಲ್ಲಿಸುವಂತೆ ಕೈ ತೂರಿಸಿದರೂ ಎದುರಿನಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಚಾಲಕರು ವಾಹನವನ್ನು ಬಸ್ ನಿಲ್ದಾಣದಿಂದ ಸುಮಾರು 200 ಮೀಟರ್ ಮುಂದಕ್ಕೆ ನಿಲ್ಲಿಸಿರುತ್ತಾರೆ. ಈ ದೂರವನ್ನು ಭಾರವಾದ ಲಗೇಜ್ನೊಂದಿಗೆ ಓಡುತ್ತಾ ಕ್ರಮಿಸುತ್ತಿರುವದನ್ನು ಬಸ್ಸಿನ ಮಹಿಳಾ ನಿರ್ವಾಹಕರು ಸ್ಪಷ್ಟವಾಗಿ ಗಮನಿಸಿದರೂ ವಾಹನವನ್ನು ಕನಿಷ್ಠ 30 ಸೆಕೆಂಡಕೂಡಾ ನಿಲ್ಲಿಸದೆ ಸೀಟಿ ಊದಿ ವಾಹನವನ್ನು ಆತುರದಲ್ಲಿ ಚಲಾಯಿಸಲು ಸೂಚಿಸಿರುತ್ತಾರೆ. ರೈಲು ನಿಲ್ದಾಣವನ್ನು ನಿಗದಿತ ಸಮಯದಲ್ಲಿ ತಲುಪಲೇಬೇಕಾದ ಅನಿವಾರ್ಯತೆ ಇದ್ದುದರಿಂದ ತಕ್ಷಣ ಪರಿಚಿತರ ದ್ವಿಚಕ್ರವಾಹನದಲ್ಲಿ ಬಸ್ ಅನ್ನು ಹಿಂಬಾಲಿಸಿ ನಡಗೋಡ ಬಸ್ ನಿಲ್ದಾಣದಲ್ಲಿ ಬಸ್ ಏರುವಂತಾಯಿತು. ಈ ಕುರಿತು ಮಹಿಳಾ ನಿರ್ವಾಹಕನ್ನು ವಿಚಾರಿಸಿದಾಗ "ಬಸ್ ನಿಲ್ಲಿಸಿದರು ಹತ್ತಿಕೊಳ್ಳದಿದ್ದರೆ ನಾವೇನು ಮಾಡೋಣ ಗಂಟೆಗಟ್ಟಲೆ ನಿಮಗಾಗಿ ಕಾಯಲು ಇದೇನು ಸ್ವತ: ಬಾಡಿಗೆ ನೀಡಿ ಮಾಡಿಸಿಕೊಂಡುಬಂದ ಖಾಸಗಿ ವಾಹನವೇ" ಎನ್ನುವ ಅರ್ಥಬರುವ ರೀತಿಯಲ್ಲಿ ಉಡಾಫೆಯಾಗಿ ಉತ್ತರಿಸಿರುತ್ತಾರೆ.
ತಮ್ಮ ಇಲಾಖೆಯ ಸಿಬ್ಬಂದಿಗಳ ಇಂತಹ ಬೇಜವಬ್ದಾರಿಯುತ ಕರ್ತವ್ಯ ನಿರ್ವಹಣೆ ಕುರಿತು ತನಿಕೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ಹಾಗೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೇ ಇರುವದರಿಂದ ಇಲಾಖೆಗೆ ಆಗುತ್ತಿರುವ ನಷ್ಟದ ಕುರಿತು ವಿಚಾರಣೆ ನಡೆಸಬೇಕಾಗಿ ವಿನಂತಿ.
ದೂರಿನ ಮುಖ್ಯ ಅಂಶಗಳು:
1. ನಿಲ್ದಾಣದಲ್ಲಿ ಪ್ರಯಾಣಿಯ ಕೈ ತೋರಿಸಿದಾಗಲೂ ಮುಂದಿರುವ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಚಾಲಕ ಅತೀವೇಗದ ಚಾಲನೆ ಮಾಡಿ ಬಸ್ ನ್ನು ನಿಲ್ದಾಣದಿಂದ ತೀರಾಮುಂದೆ ನಿಲ್ಲಿಸಿರುವುದು.
2. ಬಸ್ ನಿಲ್ದಾಣದಿಂದ ಮುಂದೆನಿಂತಾಗ ಪ್ರಯಾಣಿಕ ಹಿಂದಿನಿಂದ ಓಡೋಡಿ ಬರುತ್ತಿರುವದನ್ನು ನಿರ್ವಾಹಕರು ಗಮನಿಸಿದರೂ ವಾಹನ ಚಲಾಯಿಸುವಂತೆ ಸೂಚಿಸಿ ಬೇಜವ್ದಾರಿ ತೋರಿರುವದು.
3. ಈ ರೀತಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ಹೋಗುವದರಿಂದ ಸಂಸ್ಥೆಗೆ ಆಗುತ್ತಿರುವ ನಷ್ಟದ ಕುರಿತು.
ತಮ್ಮ ಅವಗಾಹನೆ ಮತ್ತು ದಾಖಲೆಗಾಗಿ ಬಸ್ ಪ್ರಯಾಣದ ಟಿಕೆಟಿನ ಪ್ರತಿಯನ್ನು ಲಗತ್ತಿಸಿದ್ದೇನೆ.
ಸೂಕ್ತಕ್ರಮದ ನಿರೀಕ್ಷೆಯಲ್ಲಿ,
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,
(ಕೃಷ್ಣಮೂರ್ತಿ ಹೆಗಡೆ) Was this information helpful? |
Post your Comment